ಇಡಗುಂಜಿಗೆ ಹರಿದುಬಂದ ಭಕ್ತಸಾಗರ... ವಕ್ರತುಂಡನಿಗೆ ವಿಶೇಷ ಪೂಜೆ - Idagunji ganapa temple
🎬 Watch Now: Feature Video
ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಇಡಗುಂಜಿ ಗಣಪತಿ ದೇವಸ್ಥಾನಕ್ಕಿಂದು ಭಕ್ತ ಸಾಗರವೇ ಹರಿದು ಬಂದಿತ್ತು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ವಿಘ್ನ ವಿನಾಯಕನಿಗೆ ವಿವಿಧ ಸೇವೆ ಸಲ್ಲಿಸಿ ಕೃತಾರ್ಥರಾದರು. ಭಕ್ತರಿಗೆ ಸೇವೆ ಹಾಗೂ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾತೋಬಾರ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ಬೆಳಗ್ಗೆಯಿಂದ ಕುಂಕುಮಾರ್ಚನೆ, ಪ್ರಾತಃಕಾಲದಲ್ಲಿ ಬಲಿ, ಗಣಹೋಮ, ಸತ್ಯಗಣಪತಿ ವ್ರತ, ಮಹಾಮಂಗಳಾರತಿ, ಶ್ರೀ ಮಹಾಗಣಪತಿ ಹೋಮ, ಮಹಾಪೂಜೆ, ರಾತ್ರಿ ಸುತ್ತೈಣ, ಅಷ್ಟಾವಧಾನ ಸೇವೆ ಹಾಗೂ ರಾಜೋಪಚಾರ ಪೂಜೆ ಸೇರಿದಂತೆ ಮುಂತಾದ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು.