ವಿಜಯಪುರದಲ್ಲಿ ನವರಾತ್ರಿ ಸಂಭ್ರಮ.. ಅಂಬಾಭವಾನಿಗೆ ವಿಶೇಷ ಪೂಜೆ! - ಕುಲದೇವತೆ ಅಂಬಾಭವಾನಿ
🎬 Watch Now: Feature Video
ನವರಾತ್ರಿ ಹಿನ್ನೆಲೆ ವಿಜಯಪುರ ಜಿಲ್ಲೆಯ ಹಲವೆಡೆ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ನಗರದ ಮಂದಿರಗಳಲ್ಲಿ ಘಟ ಸ್ಥಾಪನೆ ಮಾಡಿದ್ದಾರೆ. ದೇವಿ ಪೂರ್ತಿ ಪ್ರತಿಷ್ಠಾಪನೆ ಕಾರ್ಯಗಳು ನಡೆಯುತ್ತಿದ್ದು, ಜಗನ್ಮಾತೆ, ಜಗದಂಬೆ ತುಳಜಾ ಭವಾನಿ ದೇಗುಲಗಳಲ್ಲಿ ವಿಶೇಷ ಪೂಜೆ ಸಹ ನಡೆಯುತ್ತಿವೆ. ಜಿಲ್ಲೆಯಲ್ಲಿ 9 ದಿನಗಳ ಕಾಲ ಕುಲದೇವತೆ ಅಂಬಾಭವಾನಿಯನ್ನು ಪೂಜಿಸಲಾಗುತ್ತದೆ. ಇಂದು ಬೆಳಿಗ್ಗೆಯಿಂದಲೇ ಭವಾನಿ ದೇಗುಲಕ್ಕೆ ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆಯುತ್ತಿದ್ದಾರೆ. ವಿಜಯದಶಮಿಯ ನಂತರ ಬರುವ ಶೀಗಿ ಹುಣ್ಣಿಮೆಯಂದು ನೆರೆಯ ಮಹಾರಾಷ್ಟ್ರದ ಪವಿತ್ರ ಸ್ಥಳವಾದ ತುಳಜಾಪುರಕ್ಕೆ ಕಾಲ್ನಡಿಗೆಯಲ್ಲೂ ಲಕ್ಷಾಂತರ ಭಕ್ತರು ತೆರಳಿ ದೇವಿಯ ದರ್ಶನ ಪಡೆಯುತ್ತಾರೆ.