ಧಾರವಾಡದ ಜನತೆಗೆ ಅಭಿನಂದನೆ ಸಲ್ಲಿಸಿದ ನಿರ್ಗಮಿತ ಎಸ್ಪಿ - ಧಾರವಾಡ ನ್ಯೂಸ್
🎬 Watch Now: Feature Video
ಧಾರವಾಡ: ತಮ್ಮ ಕರ್ತವ್ಯದ ಅವಧಿಯಲ್ಲಿ ಸಹಕಾರ ನೀಡಿದ ಜಿಲ್ಲೆಯ ಜನತೆಗೆ ನಿರ್ಗಮಿತ ಎಸ್ಪಿ ವರ್ತಿಕಾ ಕಟಿಯಾರ್ ಅಭಿನಂದನೆ ಸಲ್ಲಿಸಿದ್ದಾರೆ. ಧಾರವಾಡದ ಡಿಎಆರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಬಳಿಕ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ 1 ವರ್ಷ 2 ತಿಂಗಳು ಕೆಲಸ ಮಾಡಿದ್ದೇನೆ. ಜಿಲ್ಲೆಯಲ್ಲಿ ಇದು ನಾನು ಆಚರಣೆ ಮಾಡುತ್ತಿರುವ ಕೊನೆಯ ಪೊಲೀಸ್ ಹುತಾತ್ಮ ದಿನಾಚರಣೆಯಾಗಿದೆ. ಮುಂದೆ ಬರುವ ಎಸ್ಪಿ ಕೂಡ ಸಾಕಷ್ಟು ಅನುಭವುಳ್ಳವರಾಗಿದ್ದಾರೆ. ಅವರಿಂದಲೂ ಉತ್ತಮ ಕಾರ್ಯಗಳಾಗಲಿವೆ. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಪೊಲೀಸರು ಹಾಗೂ ಜಿಲ್ಲೆಯ ಜನತೆ ನನಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಾನು ಕೆಲಸ ಮಾಡಿದ್ದು, ನನಗೆ ಖುಷಿ ಕೊಟ್ಟಿದೆ ಎಂದರು.