ಜೋಗದಲ್ಲಿ ಪ್ರವಾಸಿಗರಿಗೆ ಸಾಮಾಜಿಕ ಅಂತರದ ಪಾಠ ಮಾಡಿದ ಎಸ್ಪಿ ಶಾಂತರಾಜು - ಶಿವಮೊಗ್ಗ ಸುದ್ದಿ
🎬 Watch Now: Feature Video
ಶಿವಮೊಗ್ಗ: ಜಗತ್ಪ್ರಸಿದ್ಧ ಜೋಗ ಜಲಪಾತದಲ್ಲಿ ಪ್ರವಾಸಿಗರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಎಸ್ಪಿ ಶಾಂತರಾಜು ಪ್ರವಾಸಿಗರಿಗೆ ಪಾಠ ಮಾಡಿದರು. ಡಿಸಿ ಶಿವಕುಮಾರ್ ಜೊತೆ ಜೋಗಕ್ಕೆ ಭೇಟಿ ನೀಡಿದ್ದ ಎಸ್ಪಿ ಶಾಂತರಾಜು, ಪ್ರವಾಸಿಗರು ಒಬ್ಬರಿಗೊಬ್ಬರು ತಾಗಿಕೊಂಡು ಜೋಗ ವೀಕ್ಷಣೆ ಮಾಡುತ್ತಿದ್ದುದನ್ನು ನೋಡಿದ್ದಾರೆ. ಪ್ರವಾಸಿಗರು ಸಾಮಾಜಿಕ ಅಂತರ ಮರೆತು, ಜೊತೆ ಜೊತೆಯಾಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದುದನ್ನು ನೋಡಿ ಶಾಂತರಾಜು ಗರಂ ಆದರು. ತಮ್ಮ ವಾಹನದಲ್ಲಿದ್ದ ಮೈಕ್ ಮೂಲಕ ಪ್ರವಾಸಿಗರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಎಲ್ಲರೂ ನಾಲ್ಕು ಅಡಿ ದೂರ ನಿಂತು ಜಲಪಾತ ವೀಕ್ಷಿಸಿ. ಕೊರೊನಾ ಮಹಾಮಾರಿಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ ಎಂದು ಮೈಕ್ನಲ್ಲಿ ತಿಳಿಸಿ ಹೇಳಿದರು. ಇದರಿಂದ ಪ್ರವಾಸಿಗರು ಸ್ವಲ್ಪ ಅತ್ತಿತ್ತ ಓಡಾಡುವುದನ್ನು ನಿಲ್ಲಿಸಿ ಅಂತರ ಕಾಪಾಡಿಕೊಂಡು ಮುಂದುವರಿದರು.