ಕಂಕಣ ಸೂರ್ಯಗ್ರಹಣ: ಮೌಢ್ಯತೆಗೆ ಧಿಕ್ಕಾರ ಕೂಗಿದ ಪ್ರಗತಿಪರರು - ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯರು
🎬 Watch Now: Feature Video
ಧಾರವಾಡ: ಸೂರ್ಯಗ್ರಹಣ ಸಂಭವಿಸುವ ವೇಳೆ ಊಟ, ಸ್ನಾನ, ಪೂಜೆ ಮಾಡಬಾರದು ಎಂದೆಲ್ಲ ಹೇಳಲಾಗುತ್ತದೆ. ಇದಕ್ಕೆ ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯರು ಹಾಗೂ ಧಾರವಾಡದ ಪ್ರಗತಿಪರರು ಸಡ್ಡು ಹೊಡೆದಿದ್ದಾರೆ. ಕಂಕಣ ಸೂರ್ಯಗ್ರಹಣ ಒಂದು ವಿಸ್ಮಯವಷ್ಟೇ. ಇದರ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಗ್ರಹಣದ ವೇಳೆಯೇ ಧಾರವಾಡ ಕಲಾಭವನದ ಆವರಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯರು ಹಾಗೂ ಪ್ರಗತಿಪರರು ಅಡುಗೆ ಮಾಡಿ ಊಟ ಮಾಡುವ ಮೂಲಕ ಮೌಢ್ಯತೆಗೆ ಧಿಕ್ಕಾರ ಕೂಗಿದರು.