ಸಾಮಾಜಿಕ ಅಂತರ ಕಾಪಾಡಲು ನ್ಯೂ ಪ್ಲಾನ್... ಸೇಫ್ ಗೇಮ್ - ಸುಣ್ಣದ ಗುರುತು ಹಾಕಿ ಜಾಗೃತಿ
🎬 Watch Now: Feature Video
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಮುದಗಲ್ಲ ಪುರಸಭೆ ಅಧಿಕಾರಿಗಳು, ಅಗತ್ಯ ವಸ್ತುಗಳ ಖರೀದಿಗೆ ಬರುವ ಸಾರ್ವಜನಿಕರು ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸುಣ್ಣದ ಗುರುತು ಹಾಕಿ ಜಾಗೃತಿ ಮೂಡಿಸಲಾಯಿತು. ಕೊರೊನಾವನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಮನವಿ ಮಾಡಿದರು. ಅಂಗಡಿ ಮಾಲೀಕರು ಕೂಡ ಆಡಳಿತ ವ್ಯವಸ್ಥೆ ತೆಗೆದುಕೊಳ್ಳುವ ನಿರ್ಣಯ ಪಾಲಿಸಬೇಕು. ಇಲ್ಲದೇ ಹೋದರೆ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಲಾಯಿತು.