8ರ ಬಾಲೆಗೆ ಸಿದ್ಧಿಯಾಯ್ತು ಅಸಾಧಾರಾಣ ಮೇಧಾವಿತನ... ಬೆರಗು ಹುಟ್ಟಿಸುವಂತಿದೆ ಸ್ಮರಣಾಶಕ್ತಿ - Perambalur District
🎬 Watch Now: Feature Video
ಇಂದಿನ ಬಹುಪಾಲು ಮಕ್ಕಳಿಗೆ ಪಾಠ-ಪ್ರವಚನಗಳೆಂದರೆ ಅಷ್ಟಕಷ್ಟೇ. ಕೇವಲ ಮೊಬೈಲ್-ಟಿವಿ ಇನ್ನಿತರ ಮನೋರಂಜನೆಯಲ್ಲಿ ಕಾಲ ಕಳೆಯುತ್ತಾ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಾರೆ. ಆದರೆ ಪೆರಂಬಲೂರು ಜಿಲ್ಲೆಯ ಕೃಷ್ಣಪುರಂ ಗ್ರಾಮದ ದಂಪತಿ ಸಸೀಂದ್ರನ್ ಮತ್ತು ಧನಂ ಅವರ ಪುತ್ರಿ 'ಲತಿಕಾ ಶ್ರೀ' ಚಿಕ್ಕ ವಯಸ್ಸಿನಲ್ಲಿಯೇ ಅಸಾಧಾರಾಣ ಮೇಧಾವಿತನದಿಂದ ಜನಪ್ರಿಯರಾಗಿದ್ದಾಳೆ. ತನ್ನ 5 ನೇ ವಯಸ್ಸಿಗೆ ತಮಿಳಿನ ಪ್ರಸಿದ್ಧ ಕವಿ ತಿರುವಳ್ಳುವರ್ ರಚಿಸಿರುವ 'ತಿರುಕ್ಕುರಳ್' ಕೃತಿಯನ್ನು ಕಲಿಯಲು ಪ್ರಾರಂಭಿಸಿ, ಸುಮಾರು 1330 ಶ್ಲೋಕಗಳನ್ನು ಕಂಠಪಾಠ ಮಾಡಿದ್ದಾಳೆ. ಅಲ್ಲದೇ ಕುರಿಂಜಿ ಪಾಟಿನಲ್ಲಿನ ಸುಮಾರು 98 ಬಗೆಯ ಹೂವುಗಳನ್ನು ಹೆಸರಿಸುವ ಇವರು, ಕೀಬೋರ್ಡ್ ನುಡಿಸುವುದು, ಹಾಡುವುದು, ಕಥೆ ಹೇಳುವುದು ಮತ್ತು ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ ಈ ಬಾಲಕಿ.