ಮೊಲದ 3 ಮರಿಗಳನ್ನು ನುಂಗಿ, ನಾಲ್ಕನ್ನು ಕಚ್ಚಿ ಸಾಯಿಸಿದ ನಾಗರ! - snake swallowed rabbit cubs
🎬 Watch Now: Feature Video

ಶಿವಮೊಗ್ಗ: ನಾಗರಹಾವೊಂದು ಮೂರು ಮೊಲದ ಮರಿಗಳನ್ನು ನುಂಗಿ, ನಾಲ್ಕು ಮರಿಗಳಿಗೆ ಕಚ್ಚಿ ಸಾಯಿಸಿರುವ ಘಟನೆ ನಗರದ ಹೊರ ವಲಯದ ಹರಕೆರೆಯಲ್ಲಿ ನಡೆದಿದೆ. ಹರಕರೆ ದೇವಾಲಯದ ಪಕ್ಕದ ತುಂಗಾ ಏತ ನೀರಾವರಿಯ ಜಾಕ್ವೆಲ್ ಆಫೀಸ್ನಲ್ಲಿ ಕೆಲಸಗಾರರು ಮೊಲಗಳನ್ನು ಸಾಕಿದ್ದರು. ಇಲ್ಲಿನ ಮೊಲಗಳು ಮರಿಗಳನ್ನು ಹಾಕಿದ್ದವು. ಇಲ್ಲಿಗೆ ಏಕಾಏಕಿ ನುಗ್ಗಿದ ನಾಗರಹಾವೊಂದು ಮೂರು ಮರಿಗಳನ್ನು ನುಂಗಿ, ನಾಲ್ಕು ಮರಿಗಳಿಗೆ ಕಚ್ಚಿ ಅವುಗಳನ್ನು ನುಂಗಲು ಹೊರಟಾಗ ಮೊಲ ಸಾಕಿದವರು ನೋಡಿ ಹಾವನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಹಾವು ಅಲ್ಲಿಯೇ ಪೂಟರೆಯಲ್ಲಿ ಅಡಗಿತ್ತು. ಹೀಗಾಗಿ ಸ್ನೇಕ್ ಕಿರಣ್ಗೆ ಕರೆ ಮಾಡಿ ತಿಳಿಸಿದ್ದಾರೆ. ನಂತರ ಸ್ನೇಕ್ ಕಿರಣ್ ಬಂದು ನಾಗರಹಾವನ್ನು ಹೊರ ತೆಗೆದು ನೋಡಿದಾಗ ಹಾವು ಮರಿಗಳನ್ನು ನುಂಗಿರುವುದು ಗೂತ್ತಾಗಿದೆ. ಹಾವಿನಿಂದ ಮರಿಗಳನ್ನು ಹೊರಗೆ ತೆಗೆದು ಸ್ನೇಕ್ ಕಿರಣ್ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.