ಎಲ್ಲೂ ಜನರಿಲ್ಲ.. ಈ ಜಾಗಾನೂ ನಂದೇ ಅಂತ ರೈಲ್ವೆ ನಿಲ್ದಾಣಕ್ಕೆ ಬಂದ ನಾಗರ!! - snake in railway station news
🎬 Watch Now: Feature Video
ಲಾಕ್ಡೌನ್ನಿಂದ ಪ್ರಯಾಣಿಕರಿಲ್ಲದೆ ಖಾಲಿ ಇದ್ದ ಪ್ಲಾಟ್‌ಫಾರ್ಮಗೆ ನಾಗರಹಾವೊಂದು ಬಂದ ಘಟನೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ನಗರದ ರೈಲ್ವೆ ನಿಲ್ದಾಣದಲ್ಲಿ ಕಳೆದ 50 ದಿನಗಳಿಂದ ಯಾವುದೇ ರೈಲುಗಳು ಸಂಚಾರ ಮಾಡದ ಹಿನ್ನೆಲೆ ಇಡೀ ರೈಲ್ವೆ ನಿಲ್ದಾಣವೇ ಖಾಲಿ ಖಾಲಿಯಾಗಿದೆ. ರಾತ್ರಿ ನಾಗರಹಾವೊಂದು ಮೈಸೂರು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂಗೆ ಬಂದಿತ್ತು. ಇದರಿಂದ ಭದ್ರತಾ ಸಿಬ್ಬಂದಿಯನ್ನ ಗಾಬರಿಗೊಳಿಸಿತ್ತು. ತಕ್ಷಣ ಸ್ಥಳಕ್ಕೆ ಬಂದ ಸ್ನೇಕ್ ಸೂರ್ಯ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.