ಚಾಮರಾಜನಗರದ ನಡುರಸ್ತೆಯಲ್ಲಿ ಬುಸುಗುಟ್ಟಿದ ನಾಗಪ್ಪ.. ಕೈಮುಗಿದ ವಾಹನ ಸವಾರರು - ಚಾಮರಾಜನಗರದ ನಡುರಸ್ತೆಯಲ್ಲಿ ನಾಗರಹಾವು ಪತ್ತೆ
🎬 Watch Now: Feature Video
ಚಾಮರಾಜನಗರ- ಗುಂಡ್ಲುಪೇಟೆ ರಸ್ತೆಯ ಬಣ್ಣಾರಿ ಮಾರಿಯಮ್ಮ ದೇವಾಲಯ ಸಮೀಪ ಭಾರಿ ಗಾತ್ರದ ನಾಗರ ಹಾವು ಕಂಡ ವಾಹನ ಸವಾರರು ಗಲಿಬಿಲಿಯಾಗಿದ್ದಂತಹ ಘಟನೆ ನಡೆದಿದೆ. ಬೇಲಿ ಪೊದೆಯಿಂದ ದಿಢೀರ್ ರಸ್ತೆ ಮಧ್ಯೆ ಬಂದ ಹಾವು, ವಾಹನ ಓಡಾಟ ಕಂಡು ಹೆಡೆ ಎತ್ತಿ ನಿಂತುಕೊಂಡಿದೆ. ವಾಹನ ಸವಾರರು ಎಷ್ಟೇ ಹಾರ್ನ್ ಮಾಡಿದರೂ ನಾಗಪ್ಪ ಜಗ್ಗಲಿಲ್ಲ. ಈ ನಡುವೆ ರಸ್ತೆಗೆ ಬಂದ ಹಾವನ್ನು ಕಂಡು ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದರೆ ಮತ್ತೆ ಕೆಲವರು ಹಾವಿಗೆ ಕೈ ಮುಗಿದು ಭಕ್ತಿ ಪರಾಕಷ್ಟೆ ಮೆರೆದಿದ್ದಾರೆ.