ಹೆದ್ದಾರಿಯಲ್ಲಿ ಬದ್ದ ವೈರಿ ಹಾವು-ಮುಂಗುಸಿ ಜಬರ್ದಸ್ತ್ ಫೈಟ್... ವಿಡಿಯೋ! - ಕಾರವಾರ
🎬 Watch Now: Feature Video
ಕಾರವಾರ: ಬದ್ದ ವೈರಿಗಳೆಂದು ಗುರುತಿಸಿಕೊಂಡಿರುವ ಹಾವು-ಮುಂಗುಸಿ ಹೆದ್ದಾರಿಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಕಾದಾಟ ನಡೆಸಿರುವ ಘಟನೆ ಮುಂಡಗೋಡ ತಾಲ್ಲೂಕಿನ ಹುಬ್ಬಳ್ಳಿ- ಶಿರಸಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ತಾಲ್ಲೂಕಿನ ಕಾವಲಕೊಪ್ಪ ಬಳಿ ನಾಗರ ಹಾವು ಮುಂಗುಸಿ ಕಾದಾಟ ನಡೆಸಿದ್ದು, ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ. ಹಾವು-ಮುಂಗುಸಿ ಜಬರ್ದಸ್ತ್ ಕಾದಾಟ ನಡೆಸಿರುವ ಕಾರಣ ಕೆಲ ಹೊತ್ತು ವಾಹನ ಸಂಚಾರಕ್ಕೂ ಅಡೆತಡೆ ಉಂಟಾಯ್ತು. ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.