ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದರಿಂದ ನನಗೆ ಮೇಯರ್ ಸ್ಥಾನ ದಕ್ಕಿದೆ: ಎಸ್.ಟಿ. ವೀರೇಶ್ - ST Veerash is the new mayor of Palika news
🎬 Watch Now: Feature Video

ದಾವಣಗೆರೆ: ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದರಿಂದ ನನಗೆ ಮೇಯರ್ ಸ್ಥಾನ ದಕ್ಕಿದೆ ಎಂದು ಪಾಲಿಕೆಯ ನೂತನ ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು. ಚುನಾವಣೆ ಬಳಿಕ ಮಾತನಾಡಿದ ಅವರು, ಪಕ್ಷದ ವರಿಷ್ಠರ ತೀರ್ಮಾನದಂತೆ ಮೇಯರ್ ಆಗಿ ಆಯ್ಕೆಯಾಗಿದ್ದೇನೆ. ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಹಾಗೂ ಚುನಾವಣೆ ವೇಳೆ ಮತದಾನ ಮಾಡಿದ ಪಾಲಿಕೆ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಸಾಮಾನ್ಯ ಕಾರ್ಯಕರ್ತನಿಗೆ ಇಂಥ ದೊಡ್ಡ ಸ್ಥಾನ ನೀಡಿದ್ದು, ಅದನ್ನು ನಿಭಾಯಿಸುತ್ತೇನೆ. ಕುಡಿಯುವ ನೀರು, ಸ್ವಚ್ಛತೆ ಹಾಗೂ ಬೀದಿ ದೀಪಗಳ ಸಮಸ್ಯೆಯನ್ನು ನೀಗಿಸುವ ಪ್ರಯತ್ನ ಮಾಡುತ್ತೇನೆ. ವಾಟ್ಸ್ಆ್ಯಪ್ ನಂಬರ್ ಶೇರ್ ಮಾಡುವ ಮೂಲಕ ಸಮಸ್ಯೆಗಳತ್ತ ಗಮನಹರಿಸಲು ಪ್ರಯತ್ನಿಸುತ್ತೇವೆ. ಇನ್ನು ಹಂದಿ ಮುಕ್ತ ದಾವಣಗೆರೆ ಮಾಡಲು ಕೆಲ ಕಾರಣಾಂತರಗಳಿಂದ ಆಗಿಲ್ಲ, ಅದು ಕೋರ್ಟ್ನಲ್ಲಿರುವುದರಿಂದ ಸ್ವಲ್ಪ ಸಮಸ್ಯೆಯಾಗಿದ್ದು, ಅದನ್ನೂ ಕೂಡ ಪ್ರಯತ್ನ ಮಾಡುತ್ತೇವೆ ಎಂದರು.