ಕಾರ್ತಿಕ ಸೋಮವಾರದಂದು ಸರಳ ಆಚರಣೆ: ದೇವರ ದರ್ಶನ ಪಡೆದ ಸಂಸದ&ಎಂಎಲ‌್ಎ - ಬೆಂಗಳೂರು
🎬 Watch Now: Feature Video
ಪ್ರತಿ ಬಾರಿ ಕಡೆ ಕಾರ್ತಿಕ ಸೋಮವಾರದಂದು ನಗರದ ದೇವಸ್ಥಾನಗಳಲ್ಲಿ ಅದ್ದೂರಿ ಆಚರಣೆಯಾಗುತ್ತಿತ್ತು. ಅದರಲ್ಲಿಯೂ ಐತಿಹಾಸಿಕ ಸ್ಥಳ ಬಸವನಗುಡಿಯ ದೊಡ್ಡ ಗಣಪತಿ ಹಾಗೂ ದೊಡ್ಡ ಬಸವನ ಸನ್ನಿಧಿಯಲ್ಲಿ ಅದ್ದೂರಿ ಪೂಜೆ ನಡೆಯುತ್ತದೆ. ಬಸವನಗುಡಿಯ ರಸ್ತೆಗಳಲ್ಲಿ ರೈತರು ತಾವು ಬೆಳೆದ ಕಡಲೆಕಾಯಿಯನ್ನ ಒಂದು ವಾರದ ಮುಂಚೆಯೆ ಮಾರಲು ಆರಂಭಿಸುತ್ತಿದ್ದರು. ಆದರೆ, ಈ ಬಾರಿ ರೈತರ ಪಾಲಿಗೆ ಕಡೆ ಕಾರ್ತಿಕ ಸೋಮವಾರ ಸಂಕಷ್ಟದ ಸೋಮವಾರವಾಗಿದೆ. ಕೊರೊನಾ ಸೋಂಕಿನಿಂದಾಗಿ ಈ ಬಾರಿ ಕಡಲೆಕಾಯಿ ಪರಿಷೆ ರದ್ದುಗೊಳಿಸಲಾಗಿದೆ. ಅದ್ಧೂರಿ ಆಚರಣೆಗೂ ಬ್ರೇಕ್ ಬಿದ್ದಿದ್ದು, ಸರಳ ಆಚರಣೆ ಮಾಡಬೇಕು ಎಂದು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ. ದೊಡ್ಡ ಬಸವನಿಗೆ ಸರಳವಾಗಿ ಕಡಲೆ ಹಾರ ಹಾಕಿದ್ದರೆ, ದೊಡ್ಡ ಗಣೇಶನಿಗೆ ಬೆಣ್ಣೆ, ಕಡಲೆ, ಬಾದಾಮಿ ಅಲಂಕಾರ ಮಾಡಿ ಸರಳ ಪೂಜೆ ಮಾಡಲಾಯಿತು. ದೇವಸ್ಥಾನಕ್ಕೆ ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ಹಾಗೂ ಎಂಎಲ‌್ಎ ಉದಯ್ ಗರುಡಾಚಾರ್ ಭೇಟಿ ಮಾಡಿ ದೇವರ ದರ್ಶನ ಪಡೆದರು.