ಶೋಭಾ ಕರಂದ್ಲಾಜೆ ಇನ್ನು 5 ವರ್ಷಗಳ ಕಾಲ ಇತ್ತ ತಲೆ ಹಾಕಲ್ಲ: ಸಿದ್ಧರಾಮಯ್ಯ - ಮೂರು ಲಕ್ಷ ಮತಗಳ ಅಂತರದಲ್ಲಿ ಜಯ
🎬 Watch Now: Feature Video
ರಾಜ್ಯದ ಜನ 25 ಜನ ಸಂಸತ್ ಸದಸ್ಯರನ್ನು ಗೆಲ್ಲಿಸಿ ಪಾರ್ಲಿಮೆಂಟ್‌ಗೆ ಕಳುಹಿಸಿಕೊಟ್ಟಿದ್ದಾರೆ. ಶೋಭಾ ಅವರನ್ನೂ ಮತದಾರರು ಗೆಲ್ಲಿಸಿದ್ದಾರೆ. ಆದ್ರೆ ಅವರು ಎಲ್ಲಿದ್ದರೋ ಗೊತ್ತಿಲ್ಲ. ನಮ್ಮ ಜನ ಹೇಗಿದ್ದಾರೆ ನೋಡಿ. ಚುನಾವಣೆಯ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆಗೆ ಕ್ಷೇತ್ರದ ಜನ ಗೋ ಬ್ಯಾಕ್ ಅಂತಿದ್ರು. ಆದ್ರೆ, ಜನ ಚುನಾವಣೆಯಲ್ಲಿ ಅದೇಗೆ ಗೆಲ್ಲಿಸಿದ್ರೋ? ಅದೂ ಕೂಡಾ 3 ಲಕ್ಷ ಮತಗಳ ಅಂತರದಲ್ಲಿ ಎಂದೂ ಆಶ್ಚರ್ಯ ವ್ಯಕ್ತಪಡಿಸಿದ್ರು. ಆಯಮ್ಮ ಇನ್ನು ಐದು ವರ್ಷ ಇತ್ತ ತಲೆ ಹಾಕಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ರು.