ಶ್ರೀ ಸಿದ್ಧಿವಿನಾಯಕ ಸ್ವಾಮಿಯ 43ನೇ ವರ್ಷದ ಮಹೋತ್ಸವ... ಅದ್ಧೂರಿ ಮೆರವಣಿಗೆ - The procession
🎬 Watch Now: Feature Video
ತುಮಕೂರು: ಶ್ರೀ ಸಿದ್ಧಿವಿನಾಯಕ ಸ್ವಾಮಿಯ 43ನೇ ವರ್ಷದ 32 ದಿನಗಳ ಮಹೋತ್ಸವ ಇಂದು ಯಶಸ್ವಿಯಾಗಿ ನೆರವೇರಿತು. ಶಿವತಾಂಡವ ನೃತ್ಯದೊಂದಿಗೆ ಸಿದ್ಧಿವಿನಾಯಕ ನಿಮಜ್ಜನ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆಯಿಂದ ಸಾಗಿತು. ವಿದ್ಯುತ್ ದೀಪಾಲಂಕಾರಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಶಿವತಾಂಡವ ನೃತ್ಯ ಹಾಗೂ ನಾದಸ್ವರ, ವೀರಗಾಸೆ, ನಂದಿಧ್ವಜ, ಪೂಜಾ ಕುಣಿತ, ಕೀಲುಕುದುರೆ ನೃತ್ಯ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.