ಶಿವಸೇನೆ ನಿರ್ಧಾರ ಬಾಳ್ ಠಾಕ್ರೆ ಉದ್ದೇಶಕ್ಕೆ ಅವಮಾನ ಮಾಡಿದಂತೆ: ಶೋಭಾ ಕರಂದ್ಲಾಜೆ - ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ
🎬 Watch Now: Feature Video

ಉಡುಪಿ: ಸರ್ಕಾರ ರಚನೆಗಾಗಿ ಶಿವಸೇನೆಯು ಕಾಂಗ್ರೆಸ್, ಎನ್ಸಿಪಿ ಜೊತೆ ಸೇರುವುದು ಬಾಳ್ ಠಾಕ್ರೆ ಅವರ ಮೂಲ ಉದ್ದೇಶಕ್ಕೆ ಅವಮಾನ ಮಾಡಿದಂತೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದರು. ಪಡುಕೆರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಶಿವಸೇನೆ ಮೂರು ದಶಕದ ದೋಸ್ತಿಗಳು. ಕೇಂದ್ರದಲ್ಲಿ ಕೂಡ ನಾವು ಪಾರ್ಟ್ನರ್ಸ್ ಇದೀವಿ. ಹಿಂದುತ್ವದ ಆಧಾರದಲ್ಲಿ ನಾವು ಜೊತೆಯಾಗಿ ಚುನಾವಣೆ ಎದುರಿಸಿದ್ದೇವೆ. ಆದರೆ, ಈಗ ಶಿವಸೇನೆ ಯಾಕೆ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ ಗೊತ್ತಿಲ್ಲ. ಇನ್ನೂ ಅವಕಾಶ ಇದೆ, ಈಗಲೂ ಶಿವಸೇನೆ ನಮ್ಮ ಜೊತೆ ಕೈಜೋಡಿಸಿ ಮುಂದುವರೆಯಬಹುದು ಎಂದು ಸಲಹೆ ನೀಡಿದರು.