ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ರೇಷ್ಮೆ ಶೆಡ್ - ಹಾವೇರಿಯಲ್ಲಿ ಆಕಸ್ಮಿಕ ಬೆಂಕಿ
🎬 Watch Now: Feature Video
ಅಕಸ್ಮಿಕ ಬೆಂಕಿ ತಗುಲಿ ರೇಷ್ಮೆ ಸಾಕಾಣಿಕೆಯ ಮನೆ ಹೊತ್ತಿ ಉರಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕಲ್ಲೆದೇವರು ಗ್ರಾಮದಲ್ಲಿ ನಡೆದಿದೆ. ಬಸಪ್ಪ ಬಣಕಾರ ಎಂಬುವವರಿಗೆ ಸೇರಿದ ರೇಷ್ಮೆ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ರೇಷ್ಮೆ ಮನೆಯಲ್ಲಿದ್ದ ಚಂದ್ರಿಕೆಗಳು, ತುಂತುರು ನೀರಾವರಿಗೆ ಬಳಿಸುತ್ತಿದ್ದ ಪೈಪ್‌ಗಳು ಸೇರಿದಂತೆ ಹಲವು ಕೃಷಿ ಪರಿಕರಗಳು ಬೆಂಕಿಗಾಹುತಿಯಾಗಿವೆ. ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಕೃಷಿ ಉಪಕರಣಗಳು ಬೆಂಕಿಗಾಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Dec 29, 2020, 11:02 PM IST