ಮತದಾನ ಮುಗೀತಲ್ವೇ, ಇವರ ಗೋಳ್ಯಾರು ಕೇಳೋರು? ಹಳ್ಳಿಬಿಟ್ಟು ಗುಳೆ ಹೊರಟ ಬಡವರು! - ರಾಜಧಾನಿ
🎬 Watch Now: Feature Video
ರಾಯಚೂರು: ಅಲ್ಲಿನ ಜನರು ವ್ಯವಸಾಯವನ್ನೇ ನಂಬಿ ಬದುಕು ಕಟ್ಟಿಕೊಂಡವರು. ಆದರೆ, ಮಳೆ ಕೈಕೊಟ್ಟು ಭೂಮಿ ಬರಡಾಗಿದೆ. ದುಡಿಯೋ ಕೈಗಳಿಗೆ ಕೆಲಸ ಇಲ್ಲ. ಇದರ ಪರಿಣಾಮ ಬೆಳೆಯಿಲ್ಲದೆ ಭೀಕರ ಬರದ ಛಾಯೆ ಇಡೀ ಜಿಲ್ಲೆಯನ್ನೇ ಆವರಿಸಿದೆ. ಈ ಸ್ಥಿತಿಯಲ್ಲಿ ಬದುಕೋದಕ್ಕಾಗಿ ದುಡಿಯಬೇಕಲ್ವೇ, ಅದಕ್ಕಾಗಿ ರಾಯಚೂರಿನ ಜನ ರಾಜಧಾನಿಯತ್ತ ಗುಳೆ ಹೊರಟಿದ್ದಾರೆ.