ETV Bharat / bharat

ಅಕ್ರಮ ಹಣ ವರ್ಗಾವಣೆ ಆರೋಪ: ಬಿಆರ್​ಎಸ್​ ನಾಯಕ ಕೆಟಿಆರ್​ಗೆ ಇಡಿ ಸಮನ್ಸ್​​ - ED SUMMONS BRS LEADER

ಬಿಆರ್​ಎಸ್ ನಾಯಕ ಕೆಟಿಆರ್​ಗೆ​ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜನವರಿ 7 ರಂದು ಇಡಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಬೇಕು ಎಂದು ಸಮನ್ಸ್​ ನೀಡಲಾಗಿದೆ ಎಂದು ತಿಳಿದು ಬಂದಿದೆ.

ed-summons-brs-leader-ktr-in-money-laundering-case-on-jan-7
ಕೆಟಿಆರ್​ (IANS)
author img

By PTI

Published : 15 hours ago

ಹೈದರಾಬಾದ್​: 2023ರ ಫಾರ್ಮುಲಾ ಇ- ರೇಸ್​ನಲ್ಲಿನ ಅಕ್ರಮ ಹಣ ಪಾವತಿ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿವರಣೆ ಪಡೆಯುವ ಸಂಬಂಧ ಜಾರಿ ನಿರ್ದೇಶನಾಲಯ, ಬಿಆರ್​ಎಸ್​ ನಾಯಕ ಕೆಟಿ ರಾಮ್​ ರಾವ್​ ಸೇರಿದಂತೆ ಅನೇಕರಿಗೆ ಸಮನ್ಸ್​ ಜಾರಿ ಮಾಡಿದೆ.

ಮುಂದಿನ ತಿಂಗಳು ಅಂದರೆ ಜನವರಿ 7ಕ್ಕೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ತೆಲಂಗಾಣ ಪೊಲೀಸ್​ ಭ್ರಷ್ಟಚಾರ ವಿರೋಧಿ ಬ್ಯೂರೋ ದೂರನ್ನು ಗಮನದಲ್ಲಿರಿಸಿಕೊಂಡು ಪಿಎಂಎಲ್​ಎನ ವಿವಿಧ ಸೆಕ್ಷನ್​​ಗಳ​ ಅಡಿ ಕಳೆದ ವಾರ ಇಡಿ ಎಫ್​ಐಆರ್​ ದಾಖಲಿಸಿದೆ.

ಈ ಸಂಬಂಧ ಜನವರಿ 7ರಂದು ಬಿಆರ್​ಎಸ್​ ಕಾರ್ಯಕಾರಿ ಅಧ್ಯಕ್ಷ ಕೆಟಿಆರ್​ ಇಡಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸಮನ್ಸ್​ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇವರ ಜೊತೆಗೆ ಹಿರಿಯ ಐಎಎಎಸ್​ ಅಧಿಕಾರಿ ಅರವಿಂದ್​ ಕುಮಾರ್​ ಮತ್ತು ಎಚ್​ಎಂಡಿಎ ನಿವೃತ್ತ ಮಾಜಿ ಇಂಜಿನಿಯರ್​​ ಬಿಎಲ್​ಎನ್​ ರೆಡ್ಡಿಗೆ ಕ್ರಮವಾಗಿ ಜನವರಿ 2 ಮತ್ತು 3ರಂದು ಇಡಿ ಮುಂದೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

2023ರಲ್ಲಿ ಬಿಆರ್​ಎಸ್​ ಆಡಳಿತದ ಅವಧಿಯಲ್ಲಿ ಹೈದರಾಬಾದ್‌ನಲ್ಲಿ ಫಾರ್ಮುಲಾ ಇ ರೇಸ್ ನಡೆಸಲು ಅನುಮತಿಯಿಲ್ಲದೇ ವಿದೇಶಿ ಕರೆನ್ಸಿ ಮತ್ತು ಸುಮಾರು 55 ಕೋಟಿ ರೂ.ಗಳ ಪಾವತಿ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ, ಈ ಕುರಿತು ತನಿಖೆ ನಡೆಯುತ್ತಿದೆ.

ಇದರ ಜೊತೆಗೆ ಸಂಸ್ಥೆ ವಿದೇಶಿ ಹಣ ವಿನಿಮಯ ಉಲ್ಲಂಘನೆ ಸಾಧ್ಯತೆ ಕುರಿತು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಎಫ್​ಇಎಂಎ) ನಿಬಂಧನೆಗಳ ಅಡಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿರುವ ಕೆಟಿಆರ್​, ಇದರಲ್ಲಿ ಭ್ರಷ್ಟಚಾರ ಎಲ್ಲಿ ಆಗಿದೆ, 55 ಕೋಟಿಯನ್ನು ನಾವು ಪಾವತಿ ಮಾಡಿದ್ದೇವೆ. ಅವರು ಪಾವತಿಯನ್ನು ಮಾನ್ಯತೆ ಮಾಡಿದ್ದಾರೆ. ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ನಲ್ಲಿ ಎಚ್​ಎಂಡಿಎ ಖಾತೆ ಇದ್ದು, ಹಣವನ್ನು ಖಾತೆಗೆ ಜಮೆ ಮಾಡಲಾಗಿದೆ ಎಂದು ಪ್ರಕರಣ ಸಂಬಂಧ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ಬಿಆರ್‌ಎಸ್ ಆಡಳಿತದಲ್ಲಿ ಪೌರಾಡಳಿತ ಸಚಿವರಾಗಿದ್ದ ರಾಮರಾವ್ ಅವರು ಕಳೆದ ವರ್ಷ ಹೈದರಾಬಾದ್‌ನಲ್ಲಿ ಫಾರ್ಮುಲಾ ಒನ್​ ರೇಸ್​ ಆಯೋಜಿಸಿದ್ದರು.

ಇದನ್ನೂ ಓದಿ: ರಾತ್ರಿಯಿಡೀ ಗಂಗಮ್ಮ ತಾಯಿ ದೇವಸ್ಥಾನದಲ್ಲಿ ಬಂಧಿಯಾದ ದಿವ್ಯಾಂಗ ಭಕ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.