ETV Bharat / entertainment

'ಮ್ಯಾಕ್ಸ್'​ 3 ದಿನಗಳ ಕಲೆಕ್ಷನ್​ ಹೇಗಿದೆ? 'ಲೇಟಾದ್ರೂ ಲೇಟೆಸ್ಟಾಗಿ ಬರ್ತೀವಿ' ಎಂದಿದ್ದ ಕಿಚ್ಚನಿಗೆ ಪ್ರಶಂಸೆಯ ಸುರಿಮಳೆ - MAX COLLECTION

''ನಿಮ್ಮೆಲ್ಲರನ್ನು ಕಂಡು ತುಂಬಾನೆ ಖುಷಿ ಆಗುತ್ತಿದೆ. ಎರಡೂವರೆ ವರ್ಷಗಳ ನಂತರ ನನ್ನ ಸಿನಿಮಾ ತೆರೆಕಾಣುತ್ತಿದೆ. ಲೇಟ್​ ಆಗಿದ್ದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಆದರೆ ನಾವು ಲೇಟಾಗಿ ಬಂದರೂ ಲೇಟೆಸ್ಟಾಗಿ ಬರುತ್ತೇವೆ‌'' - ಸುದೀಪ್​.

Kichcha Sudeep
ಅಭಿನಯ ಚಕ್ರವರ್ತಿ ಸುದೀಪ್​ (Photo: ETV Bharat)
author img

By ETV Bharat Entertainment Team

Published : 15 hours ago

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್​ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಮ್ಯಾಕ್ಸ್​​' ತನ್ನ ಉತ್ತಮ ಪ್ರದರ್ಶನ ಮುಂದುವರಿಸಿದೆ. ವಿಜಯ್​ ಕಾರ್ತಿಕೇಯ ನಿರ್ದೇಶನದ ಸಿನಿಮಾ ಬಾಕ್ಸ್​ ಆಫೀಸ್​ನಲ್ಲೂ ಸದ್ದು ಮಾಡಿದೆ. ಅಂಕಿ - ಅಂಶಗಳು ಕೊಂಚ ಏರಿಳಿಕೆ ಕಂಡರೂ ಗಳಿಕೆ ಉತ್ತಮವಾಗಿ ಸಾಗಿದೆ. ಇಲ್ಲಿ ನಾವು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್ ವರದಿಯನ್ನು ಆಧರಿಸಿ ಮಾಹಿತಿ ಒದಗಿಸುತ್ತಿದ್ದು, ಅಭಿಮಾನಿಗಳು ಚಿತ್ರತಂಡ ಕಡೆಯಿಂದ ಘೋಷಣೆ ನಿರೀಕ್ಷಿಸಿದ್ದಾರೆ.

ಬಹುದಿನಗಳಿಂದ ಸಖತ್​ ಸದ್ದು ಮಾಡಿದ್ದ ಸಿನಿಮಾ ಬುಧವಾರ, ಕ್ರಿಸ್ಮಸ್ ವಿಶೇಷವಾಗಿ ತೆರೆಕಂಡಿತು. ರಜಾ ದಿನವನ್ನು ಸದುಪಯೋಗಪಡಿಸಿಕೊಂಡ ಸಿನಿಮಾದ ಕಲೆಕ್ಷನ್​​ ಸೂಪರ್​ ಆಗಿಯೇ ಇತ್ತು. ವಾರದ ದಿನ ಆದ ಹಿನ್ನೆಲೆ ಗುರುವಾರದ ಕಲೆಕ್ಷನ್​​ನಲ್ಲಿ ಕೊಂಚ ವ್ಯತ್ಯಾಸ ಕಂಡು ಬಂದಿದೆ. ಹಾಗಂತಾ ಸಿನಿಮಾ ಸದ್ದೇನು ಕಡಿಮೆ ಆಗಿಲ್ಲ. ಮಿಶ್ರ ಪ್ರತಿಕ್ರಿಯೆಗಳ ಪೈಕಿ ಬಹುತೇಕ ಪ್ರಶಂಸೆ ಸ್ವೀಕರಿಸಿರುವ ಸಿನಿಮಾದ ಮೂರು ದಿನಗಳ ಒಟ್ಟು ಕಲೆಕ್ಷನ್​​​ ಉತ್ತಮವಾಗಿದ್ದು, ಎಲ್ಲರ ಗಮನವೀಗ ವೀಕೆಂಡ್​ ಕಲೆಕ್ಷನ್​ ಮೇಲಿದೆ. ಯಾಕಂದ್ರೆ ಸಿನಿಮಾದ ಹೆಚ್ಚಿನ ಗಳಿಕೆ ವಾರಾಂತ್ಯದಲ್ಲೇ ಆಗೋದು. ಕಳೆದ ದಿನ ಚಿತ್ರ 4.15 ಕೋಟಿ ರೂಪಾಯಿ (ಆರಂಭಿಕ ಅಂದಾಜು) ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: ಅಮಿತಾಭ್​, ಶಾರುಖ್​​​ To ದೀಪಿಕಾ: ನಯಾ ಪೈಸೆ ಪಡೆಯದೇ ನಟಿಸಿದ ಸೂಪರ್​​ ಸ್ಟಾರ್​ಗಳಿವರು

ಮ್ಯಾಕ್ಸ್​ ಬಾಕ್ಸ್​ ಆಫೀಸ್​​ ಕಲೆಕ್ಷನ್​​: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಅಭಿನಯ ಚಕ್ರವರ್ತಿಯ ಬಹುನಿರೀಕ್ಷಿತ ಚಿತ್ರ ತೆರೆಕಂಡ ದಿನ ಅಂದರೆ ಬುಧವಾರದಂದು ಬರೋಬ್ಬರಿ 8.7 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿತ್ತು. ಎರಡನೇ ದಿನ ಅಂಕಿ - ಅಂಶದಲ್ಲಿ ಕೊಂಚ ಕುಸಿತವಾಯಿತು. ಗುರುವಾರದಂದು ಸಿನಿಮಾ 3.85 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ, ನಿನ್ನೆ ಚಿತ್ರ 4.15 ಕೋಟಿ ರೂಪಾಯಿ ಸಂಪಾದಿಸಿದೆ. ಅಲ್ಲಿಗೆ ಸಿನಿಮಾ ತನ್ನ ಮೂರು ದಿನಗಳಲ್ಲಿ ಒಟ್ಟು 16.70 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಮೊದಲ ದಿನಕ್ಕೆ ಹೋಲಿಸಿದರೆ, ನಂತರದ ಎರಡು ದಿನಗಳಲ್ಲಿ ಅಂಕಿ - ಅಂಶದಲ್ಲಿ ವ್ಯತ್ಯಾಸ ಕಂಡುಬಂದಿದೆ. ಅದಾಗ್ಯೂ, ವಾರದ ದಿನದಲ್ಲಿ ಉತ್ತಮ ವ್ಯವಹಾರ ನಡೆಸಿದ್ದು, ವೀಕೆಂಡ್​ ಶೋಗಳಲ್ಲಿ ಕಲೆಕ್ಷನ್​ ಏರುವ ಸಾಧ್ಯತೆ ಹೆಚ್ಚಿದೆ. ಎಲ್ಲರ ಗಮನವೀಗ ಶನಿವಾರ ಮತ್ತು ಭಾನುವಾರದ ವ್ಯವಹಾರದ ಮೇಲಿದೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ ಟಾಲಿವುಡ್​ ಪ್ರೊಡಕ್ಷನ್​ ಹೌಸ್​: ಗಣಿ ಹೊಸ ಸಿನಿಮಾ ಅನೌನ್ಸ್

ಲೇಟಾದ್ರೂ ಲೇಟೆಸ್ಟಾಗಿ ಬರ್ತೀವಿ: ಸಿನಿಮಾ ಪ್ರಮೋಶನ್​ ಭಾಗವಾಗಿ ಡಿಸೆಂಬರ್​ ನಡುವಲ್ಲಿ ಬೆಂಗಳೂರಿನ ಒರಾಯನ್ ಮಾಲ್​​ನ ಆವರಣದಲ್ಲಿರುವ ಕೆರೆಯಂಗಳದಲ್ಲಿ‌ ವರ್ಣರಂಜಿತ ಸಮಾರಂಭ ಜರುಗಿತ್ತು. ಅಲ್ಲಿ ಮಾತನಾಡಿದ್ದ ಕಿಚ್ಚ, ''ನಿಮ್ಮೆಲ್ಲರನ್ನು ಕಂಡು ತುಂಬಾನೆ ಖುಷಿ ಆಗುತ್ತಿದೆ. ಎರಡೂವರೆ ವರ್ಷಗಳ ನಂತರ ನನ್ನ ಸಿನಿಮಾ ತೆರೆಕಾಣುತ್ತಿದೆ. ಲೇಟ್​ ಆಗಿದ್ದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಆದ್ರೆ ನಾವು ಲೇಟಾಗಿ ಬಂದರೂ ಲೇಟೆಸ್ಟಾಗಿ ಬರುತ್ತೇವೆ‌. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ'' ಎಂದು ಕೇಳಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.