ಕೊಪ್ಪಳದಲ್ಲಿ ಎಂಆರ್ಪಿಗಿಂತ ಅಧಿಕ ಬೆಲೆಗೆ ಮಧ್ಯ ಮಾರಾಟ...ಕ್ರಮ ಕೈಗೊಳ್ಳುವಂತೆ ಒತ್ತಾಯ - Selling liquor at Gangavathi for more than MRP
🎬 Watch Now: Feature Video
ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಬಹುತೇಕ ಮದ್ಯದಂಗಡಿಗಳಲ್ಲಿ ಎಂಆರ್ಪಿಗಿಂತ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಯುವಕರು ಆಗ್ರಹಿಸಿದ್ದಾರೆ. ನಗರದ ಮೀಡಿಯಾ ಕ್ಲಬ್ನಲ್ಲಿ ಮರಕುಂಬಿ ಗ್ರಾಮದ ಯುವಕ ಚನ್ನವೀರಯ್ಯ ಹಾಗೂ ಸ್ನೇಹಿತರು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.