ಶಾ -ಶಿಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ - ಚಿಕ್ಕಬಳ್ಳಾಪುರ ಸುದ್ದಿ
🎬 Watch Now: Feature Video
ಚಿಕ್ಕಬಳ್ಳಾಪುರ:ಜಿಲ್ಲೆಯ ಗುಡಿಬಂಡೆ ತಾಲೂಕಿನ ವರ್ಲಕೊಂಡ ಬಳಿಯ ಶಾ-ಶಿಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ತೀವ್ರ ರಕ್ತದ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಗೆ ರಕ್ತದಾನ ಮಾಡಿ ಸಂತೃಪ್ತಿಯ ಭಾವ ಹೊಂದಬೇಕು. ದಾನಿಯಲ್ಲಿ ಹೊಸ ರಕ್ತ ಉತ್ಪಾದನೆಗೆ ಮತ್ತು ಹೊಸ ಚೈತನ್ಯಕ್ಕೆ ಸಹಕಾರಿಯಾಗುವುದರ ಜತೆ ರಕ್ತದ ನಿರೀಕ್ಷೆಯಲ್ಲಿದ್ದ ವ್ಯಕ್ತಿಯ ಬದುಕಿಗೆ ಹೊಸ ಆಶಾಕಿರಣ ಮೂಡಿಸಿ ನಮ್ಮೊಟ್ಟಿಗೆ ಬದುಕಲು ಅನುಕೂಲ ಮಾಡಿಕೊಟ್ಟಂತಾಗುತ್ತೆ ಎಂಬ ಸಂದೇಶ ಸಾರಲಾಯಿತು.