ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಯ್ತು ಉಡುಪಿ ಸೀತಾನದಿಯ ಅಬ್ಬರದ ದೃಶ್ಯಗಳು
🎬 Watch Now: Feature Video
ಉಡುಪಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆಯಾಗಿದೆ. ದಿನಕ್ಕೆ ಸರಾಸರಿ ನೂರು ಮಿಲಿಮೀಟರ್ನಷ್ಟು ಮಳೆ ಬಿದ್ದಿದ್ದು, ನಾಲ್ಕು ದಿನದಲ್ಲಿ 500 ಮಿಲಿಮೀಟರ್ ಮಳೆಯಾಗಿದೆ. ಮುಂಗಾರು ಅಬ್ಬರಕ್ಕೆ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ತುಳುಕುತ್ತಿವೆ. ಇದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟಿ, ಹೆಬ್ರಿ ತಾಲೂಕು ದಾಟಿ, ಬ್ರಹ್ಮಾವರ ತಾಲೂಕಿನಲ್ಲಿ ಹಾದು ಸಮುದ್ರ ಸೇರುವ ಸೀತಾನದಿಯ ದೃಶ್ಯ. ನೀಲಾವರದ ಸಿದ್ಧಾರ್ಥ್ ಎಂಬವವರು ತಮ್ಮ ಡ್ರೋಣ್ ಕ್ಯಾಮೆರಾ ಮೂಲಕ ಈ ಅದ್ಭುತ ದೃಶ್ಯವನ್ನು ಸೆರೆ ಹಿಡಿದ್ದಾರೆ.