ಮಂಗಳೂರಿನಲ್ಲಿ ಮೀನುಗಾರರಿಂದ ಸಮುದ್ರಪೂಜೆ - Sea Worship by Fishermen in Mangalore
🎬 Watch Now: Feature Video
ಮಂಗಳೂರಿನಲ್ಲಿ ಸಮುದ್ರಪೂಜೆ ನಡೆಸುವ ಮೂಲಕ ಈ ಬಾರಿಯ ಮೀನುಗಾರಿಕೆ ಸಮೃದ್ದಿಯಿಂದ ಮತ್ತು ಯಾವುದೇ ವಿಘ್ನ ಬಾರದಂತೆ ನಡೆಯಲಿ ಎಂದು ಮೀನುಗಾರರು ಪ್ರಾರ್ಥಿಸಿದರು. ಏಳುಪಟ್ಣ ಮೊಗವೀರ ಸಂಯುಕ್ತ ಸಭಾ ಆಯೋಜಿಸಿದ ಸಮುದ್ರ ಪೂಜೆಗೆ ಬೋಳೂರುನಿಂದ ಬೆಳಿಗ್ಗೆ ಮೆರವಣಿಗೆಯಲ್ಲಿ ಹೊರಟ ಮೀನುಗಾರರು ತಣ್ಣೀರು ಬಾವಿ ಸಮುದ್ರತೀರಕ್ಕೆ ಬಂದು ಪೂಜೆ ಸಲ್ಲಿಸಿದರು. ಕದಲೀ ಜೋಗಿಮಠದ ಸ್ವಾಮೀಜಿ ನೇತೃತ್ವದಲ್ಲಿ ತಣ್ಣೀರುಬಾವಿ ಸಮುದ್ರತೀರದಲ್ಲಿ ಸಮುದ್ರ ಪೂಜೆ ನಡೆಯಿತು. ಸಮುದ್ರಕ್ಕೆ ಹಾಲು, ತೆಂಗಿನಕಾಯಿ ಸಮರ್ಪಿಸುವ ಮೂಲಕ ಗಂಗಾ ಪೂಜೆ ನಡೆಸಲಾಯಿತು.