ಕೊಪ್ಪಳದಲ್ಲಿ ನಾಳೆಯಿಂದ ಶಾಲೆಗಳು ಆರಂಭ: ಸಿಬ್ಬಂದಿಯಿಂದ ಸಕಲ ಸಿದ್ಧತೆ - School-college start tomorrow
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10071452-thumbnail-3x2-vis.jpg)
ಕೊಪ್ಪಳ: ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಶಾಲೆಯ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಜ್ ಮಾಡಿಸಲಾಗಿದೆ. ಶಿಕ್ಷಕರು ಸಹ ವಿದ್ಯಾಗಮದ ಎರಡನೇ ಭಾಗಕ್ಕೆ ತಯಾರಾಗಿದ್ದಾರೆ. ವಿದ್ಯಾಗಮದ ಮೊದಲನೇ ಭಾಗ ಅರ್ಧಕ್ಕೆ ನಿಂತು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಈಗ ಅದರ ಮುಂದುವರೆದ ಭಾಗವಾಗಿ ನಾಳೆಯಿಂದ 6 ನೇ ತರಗತಿಯಿಂದ 10 ನೇ ತರಗತಿಯವರೆಗೆ ಶಾಲೆಗಳು ಪ್ರಾರಂಭಗೊಳ್ಳುತ್ತಿವೆ.