ಅಂಗಡಿ ಮಾಲೀಕರ ಮೇಲೆ ಅಮಾನವೀಯವಾಗಿ ಲಾಠಿ ಬೀಸಬೇಡಿ: ಸತೀಶ್ ಜಾರಕಿಹೊಳಿ ಎಚ್ಚರಿಕೆ - satish jarakiholi latest news
🎬 Watch Now: Feature Video
ದಿನಸಿ, ರೇಷನ್ ಅಂಗಡಿ ಮಾಲೀಕರ ಮೇಲೆ ಅಮಾನವೀಯವಾಗಿ ಲಾಠಿ ಬೀಸುತ್ತಿರುವ ಪೊಲೀಸರಿಗೆ ಲಾಠಿ ಬೀಸದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸೂಚನೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ರೇಷನ್ ಶಾಪ್ ನಂಬರ್ 185ರ ಮಾಲೀಕ ಮಾರುತಿ ಬಸವಣ್ಣೆಪ್ಪ ಬಾಗೋಜಿ ಎಂಬುವರಿಗೆ ಪೊಲೀಸರು ಮನಬಂದಂತೆ ಥಳಿಸಿ, ಬಸ್ಕಿ ಹೊಡೆಸಿದ್ದರು. ಅಲ್ಲದೇ ದಿನಸಿ ಅಂಗಡಿಗಳಿಗೂ ನುಗ್ಗಿ ಸಾಕಷ್ಟು ಜನರ ಮೇಲೆ ಲಾಠಿ ಬೀಸಿದ್ದರು. ದಿನಸಿ ಅಂಗಡಿ ಮಾಲೀಕರ ಮೇಲೆ ಲಾಠಿ ಬೀಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದನ್ನು ಗಮನಿಸಿದ ಸತೀಶ ಜಾರಕಿಹೊಳಿ, ಪದೇ-ಪದೇ ರಸ್ತೆಗಿಳಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಅಗತ್ಯ ವಸ್ತು ಪೂರೈಕೆ ಮಾಡುವವರ ಮೇಲೆ ಲಾಠಿ ಬೀಸಬೇಡಿ ಎಂದು ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.