ಸಿದ್ದರಾಮಯ್ಯ ಬಗ್ಗೆ ಮಾತನಾಡುವಾಗ ಬಿ.ಸಿ.ಪಾಟೀಲ್ ಎಚ್ಚರಿಕೆಯಿಂದಿರಬೇಕು: ಎಸ್.ರಾಮಪ್ಪ - ಹಿರೆಕೇರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ ಪಾಟೀಲ್
🎬 Watch Now: Feature Video
ರಾಣೆಬೆನ್ನೂರು: ಹಿರೆಕೇರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು ಸಿದ್ದರಾಮಯ್ಯ ಬಗ್ಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹರಿಹರ ಶಾಸಕ ಎಸ್.ರಾಮಪ್ಪ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಕಳ್ಳನಂತೆ ರಾತ್ರೋರಾತ್ರಿ ಹೋಗಿ ಕೋಟ್ಯಂತರ ರೂ. ಪಡೆದು ಬಿಜೆಪಿ ಕಡೆ ವಾಲಿದ್ದಾನೆ. ಈಗ ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾನೆ. ಈ ರೀತಿ ಮುಂದುವರೆದರೆ ಬಹಳ ಕಷ್ಟವಾಗುತ್ತದೆ ಎಂದು ಶಾಸಕ ರಾಮಪ್ಪ ಬಿ.ಸಿ.ಪಾಟೀಲಗೆ ಎಚ್ಚರಿಕೆ ನೀಡಿದರು.