ಆರ್.ಆರ್. ನಗರದಲ್ಲಿ ಯಾರೇ ಆಯ್ಕೆ ಆದರೂ ಬೆಟ್ಟದಷ್ಟಿದೆ ಸಮಸ್ಯೆ.. - RR nagara by-election result
🎬 Watch Now: Feature Video
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಇನ್ನೆರಡು ದಿನದಲ್ಲಿ ಶಾಸಕರು ಯಾರಾಗುತ್ತಾರೆ ಎನ್ನುವುದು ಅಧಿಕೃತವಾಗಲಿದೆ. ಆಯ್ಕೆಯಾಗುವವರು ಕ್ಷೇತ್ರಕ್ಕೆ ಕೇವಲ ಶಾಸಕರು ಮಾತ್ರವಲ್ಲ, ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಬಾಧ್ಯಸ್ಥರೂ ಆಗಿರುತ್ತಾರೆ. ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರಕ್ಕೆ ಶಾಸಕರಿಲ್ಲದೇ ಇದ್ದರೂ, ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ, ಆಯ್ಕೆಯಾಗುವ ಜನಪ್ರತಿನಿಧಿಗಳಿಂದ ಇನ್ನಷ್ಟು ಸೇವೆಯ ನಿರೀಕ್ಷೆಯಲ್ಲಿ ಇಲ್ಲಿನ ಜನರಿದ್ದಾರೆ.