ಇಂದಿಗೂ 'ದಾಸ' ದಾಸನಾಗಿಯೇ ಇದ್ದಾರೆ: 'ಡಿ ಬಾಸ್' ಬಗ್ಗೆ ನಟ ಶರಣ್ ಹೀಗೆ ಹೇಳಿದ್ದು ಯಾಕೆ..! - ಹುಬ್ಬಳ್ಳಿಯಲ್ಲಿ ರಾಬರ್ಟ್ ಪ್ರಿ-ರಿಲೀಸ್ ಈವೆಂಟ್
🎬 Watch Now: Feature Video
ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಡಿ ಬಾಸ್ ಜೊತೆಗಿನ ಸಿನಿ ಜರ್ನಿಯ ಕುರಿತು ಹಿಂದಿನ ದಿನಗಳನ್ನು ನಟ ಶರಣ್ ಮೆಲುಕು ಹಾಕಿದ್ದಾರೆ. ಅಂದಿನ ದಿನಗಳನ್ನು ಇಂದಿಗೂ ನಾನು ನೆನೆಯುತ್ತೇನೆ. ಅಂದು ನಾನು ನೋಡಿ ದರ್ಶನ್ ಇಂದಿಗೂ ಸ್ವಲ್ಪವೂ ಬದಲಾವಣೆಯಾಗಿಲ್ಲ. ಸ್ಟಾರ್ ಗಿರಿ ಸಿಕ್ರೆ ಸ್ವಲ್ಪವಾದ್ರೂ ಬದಲಾವಣೆಯಾಗುವ ಜನರ ನಡುವೆ 'ದಾಸ' ದಾಸನಾಗಿಯೇ ಇವತ್ತಿಗೂ ಮೊದಲಿನ ಹಾಗೆಯೇ ಇದ್ದಾರೆ ಎಂದು ನಟ ದರ್ಶನ್ ಅವರನ್ನು ಹೊಗಳಿದರು.