ಮಿತಿ ಮೀರಿದ ಬೈಕ್ ಕಳ್ಳರ ಹಾವಳಿ: ಸಿಸಿಟಿವಿಯಲ್ಲಿ ಸೆರೆ - ಬೈಕ್ ಕಳ್ಳರ ಹಾವಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6111037-thumbnail-3x2-bng.jpg)
ಮನೆ ಎದುರು ನಿಲ್ಲಿಸಿದ್ದ ಬೈಕ್ನ ಕದ್ಯೊಯ್ದ ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದು ಪೊಲೀಸರಿಗೂ ತಲೆನೋವಾಗಿದೆ. ರಾತ್ರಿ ಬೀಟ್, ಮುನ್ನೆಚ್ಚರಿಕೆ ಕ್ರಮ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆಯಂತಹ ಕ್ರಮ ತೆಗೆದುಕೊಂಡರು ವಾಹನ ಕಳ್ಳತನ ಕಡಿಮೆಯಾಗಿಲ್ಲ. ಈಗ ಶರವಣ ಎಂಬುವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.