ಬಾದಲ್ ಕ್ರಿಯೇಟಿವಿಟಿಗೆ ಸಿಕ್ತು ಪ್ರತಿಫಲ: ಚಂದ್ರಗ್ರಹದಂತಿದ್ದ ರಸ್ತೆಯಲ್ಲೀಗ ರಿಪೇರಿ ಕಾರ್ಯ - ಬಾದಲ್ ನಂಜುಂಡಸ್ವಾಮಿ
🎬 Watch Now: Feature Video
ಬೆಂಗಳೂರು: ಇಲ್ಲಿನ ತುಂಗಾನಗರ ಮುಖ್ಯರಸ್ತೆಯ ಗುಂಡಿಗಳನ್ನು ಚಂದ್ರಗ್ರಹದಂತೆ ವಿಡಂಬನೆ ಮಾಡಿ ಚಿತ್ರೀಕರಿಸಿದ್ದ ಬಾದಲ್ ನಂಜುಂಡಸ್ವಾಮಿಯವರ ಕಲೆಗೆ ಪ್ರತಿಫಲ ಸಿಕ್ಕಿದೆ. ಚಂದ್ರಗ್ರಹದಲ್ಲಿ ಗಗನಯಾತ್ರಿಯಂತೆ ನಡೆಯುವ ರಸ್ತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ ಇಂದು ರಸ್ತೆಯ ದುರಸ್ತಿ ನಡೆಸುತ್ತಿದೆ. ಇದಕ್ಕಾಗಿ ಬಾದಲ್ ನಂಜುಂಡಸ್ವಾಮಿ ಅವರು ಪಾಲಿಕೆ ಆಯುಕ್ತರಿಗೆ, ಮೇಯರ್ ಹಾಗೂ ಸ್ಥಳೀಯ ಚೀಫ್ ಇಂಜಿನಿಯರ್ ಪ್ರಭಾಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಬಾದಲ್ ಅವರ ಈ ಫೇಸ್ ಬುಕ್ ಪೋಸ್ಟ್ಗೆ ನೂರಾರು ಕಮೆಂಟ್ಗಳು ಬಂದಿದ್ದು, ತಮ್ಮ ಊರಿನ ಸಮಸ್ಯೆಯನ್ನೂ ಪ್ರತಿನಿಸಿಧಿಸುವಂತೆ ಕೋರಿದ್ದಾರೆ.