ಕನ್ಹಯ್ಯ ಕುಮಾರ್ ಆಗಮನಕ್ಕೆ ಸಿಗದ ಅನುಮತಿ: ಗುಲ್ಬರ್ಗಾ ವಿವಿ ನಿರ್ಧಾರ ಖಂಡಿಸಿ ವಿದ್ಯಾರ್ಥಿಗಳ ಧರಣಿ - ಗುಲ್ಬರ್ಗಾ ವಿವಿ ನಿರ್ಧಾರ ವಿರೋಧಿಸಿ ಧರಣಿ ಕೂತ ಸಂಶೋಧನಾ ವಿದ್ಯಾರ್ಥಿಗಳು
🎬 Watch Now: Feature Video
ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು, 'ಡಾ. ಬಿ ಆರ್ ಅಂಬೇಡ್ಕರ್ ಕಂಡ ಆಧುನಿಕ ಭಾರತದಲ್ಲಿ ವಿದ್ಯಾರ್ಥಿಗಳ ಪಾತ್ರ' ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ರನ್ನು ಆಹ್ವಾನಿಸಲಾಗಿತ್ತು. ಈಗ ದಿಢೀರ್ ಆಗಿ ಬಿಜೆಪಿ ಸಂಸದ ಭಗವಂತ ಖೂಬಾ ಸೂಚನೆ ಮೇರೆಗೆ, ಕನ್ಹಯ್ಯ ಕುಮಾರ್ ಆಗಮನಕ್ಕೆ ನೀಡಿದ್ದ ಅನುಮತಿಯನ್ನು ವಿವಿ ಹಿಂಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಿ ವಿ ನಿರ್ಧಾರವನ್ನು ವಿರೋಧಿಸಿ, ವಿದ್ಯಾರ್ಥಿಗಳು ಕುಲಪತಿ ಪ್ರೊ. ಪರಿಮಳ ಅಂಬೇಕರ್ ಅವರ ಚೇಂಬರ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅನುಮತಿ ನೀಡುವವರೆಗೂ ಹೋರಾಟ ಕೈಬಿಡುವುದಿಲ್ಲವೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.