ಶಾಲಾ ಕಟ್ಟಡದ ಗೋಡೆಗಳ ಮೇಲೆ ವರ್ಣರಂಜಿತ ಕಲಾಕೃತಿಗಳ ಕಲರವ - ರಟ್ಟಿಹಳ್ಳಿ ತಾಲೂಕಿನ ಯಡಗೋಡ ಸರ್ಕಾರಿ ಪ್ರೌಢಶಾಲೆ
🎬 Watch Now: Feature Video
ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಯಡಗೋಡ ಸರ್ಕಾರಿ ಪ್ರೌಢಶಾಲೆ ವರ್ಣಮಯವಾಗಿದೆ. ಚಿತ್ರ ಶಿಕ್ಷಕ ಮತ್ತು ಇತರ ಶಿಕ್ಷಕರು ಶಾಲೆಯ ಗೋಡೆಗಳನ್ನು ವರ್ಲಿ, ನವ ವರ್ಲಿ ಮತ್ತು ಖಾವಿ ಕಲೆಗಳಿಂದ ಅಲಂಕರಿಸಿದ್ದಾರೆ. ವರ್ಲಿ ಕಲೆಯಲ್ಲಿ ಜಾನಪದ ಜೀವನಶೈಲಿಯ ಚಿತ್ರಣಗಳನ್ನು ಅನಾವರಣಗೊಳಿಸಲಾಗಿದೆ. ಶಾಲೆಯ ಚಿತ್ರಶಿಕ್ಷಕ ಪರಮೇಶ್ವರ್ ಲಾಕ್ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದು, ಪರಿಣಾಮ ಯಡಗೋಡ ಪ್ರೌಢಶಾಲೆಯು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ ಎನ್ನುವಂತೆ ರೂಪುಗೊಂಡಿದೆ. ನವ್ಯ ಕಲೆಗಳನ್ನು ಸಹ ಗೋಡೆಗಳ ಮೇಲೆ ಬಿಡಿಸಿರುವುದು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.