ಎಸ್ಪಿಬಿಗೆ ಸಂತಾಪ ಸೂಚಿಸಿದ ರಂಭಾಪುರಿ ಸ್ವಾಮೀಜಿಗಳು - Singer Balasubramanyam Passed away
🎬 Watch Now: Feature Video
ಚಿಕ್ಕಮಗಳೂರು : ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಎನ್ಆರ್ಪುರ ತಾಲೂಕು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಗೀತೆಗಳು ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ. ಜಗದ್ಗುರು ರೇಣುಕಾಚಾರ್ಯರ ಶ್ಲೋಕಗಳನ್ನು ಅವರು ಜನರಿಗೆ ಮುಟ್ಟಿಸಿದ್ದಾರೆ. ಎಲ್ಲ ವರ್ಗ, ಸಮುದಾಯದ ಜನರಿಗೆ ಪ್ರೀತಿ ಪಾತ್ರರಾಗಿದ್ದರು. ಶ್ರೇಷ್ಠ ಗಾಯಕರನ್ನು ಕಳೆದುಕೊಂಡು ಈ ನಾಡು ಬಡವಾಗಿದೆ. ಅಗಲಿದ ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಹಾರೈಸಿದರು.