ನೆರೆ ಸಂತ್ರಸ್ತರಿಗೆ ರಾಮಕೃಷ್ಣ ಆಶ್ರಮ ವತಿಯಿಂದ ದಿನಬಳಕೆಯ ಕಿಟ್ ವಿತರಣೆ.. - ಇವೋಲ್ಟಿಂಗ್ ಸಿಸ್ಟಮ್ ನೆಟವರ್ಕ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4380632-thumbnail-3x2-blg.jpg)
ಬೆಳಗಾವಿ:ಪ್ರವಾಹದ ಹೊಡೆತಕ್ಕೆ ಸಿಲುಕಿರುವ ನೆರೆ ಸಂತ್ರಸ್ತರ ನೆರವಿಗೆ ರಾಮಕೃಷ್ಣ ಆಶ್ರಮ ಮತ್ತು ಇವೋಲ್ಟಿಂಗ್ ಸಿಸ್ಟಮ್ ನೆಟವರ್ಕ್ ಇಡಿಯಾ ಪ್ರೈ.ಲಿ ಕಂಪನಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಬಳಕೆ ಸಾಮಗ್ರಿಗಳನ್ನು ನೀಡಿದರು. ಮನೆ-ಮಠ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ, ಬೆಂಗಳೂರಿನಿಂದ ಆಗಮಿಸಿರುವ ರಾಮಕೃಷ್ಣ ಯೋಗಾಶ್ರಮದ ಯೋಗೇಶ್ವರ ಸ್ವಾಮೀಜಿಗಳು ಸಂತ್ರಸ್ತರಿಗೆ ಪರಿಹಾರದ ಕಿಟ್ ವಿತರಿಸಿದರು. ನದಿ ಇಂಗಳಗಾವ, ದರೂರ, ತೀರ್ಥ, ಸಪ್ತಸಾಗರ ಸೇರಿದಂತೆ ಹತ್ತಾರು ಗ್ರಾಮಗಳ ಸಾವಿರಕ್ಕೂ ಅಧಿಕ ಜನರಿಗೆ ಚಾಪೆ, ರಗ್ಗು, ಅಕ್ಕಿ, ಬೇಳೆ, ಗೋಧಿ ಹಿಟ್ಟು ಹೀಗೆ ದಿನಬಳಕೆಯ ಸಾಮಗ್ರಿಗಳನ್ನು ವಿತರಿಸಿದರು.