ಕೊಡಗಿನಲ್ಲಿ ಮತ್ತೆ ಮಳೆಯಾಗುತಿದೆ.. ಜನರಲ್ಲಿ ಆತಂಕ ಮೂಡಿದೆ - ಮಳೆ ನ್ಯೂಸ್
🎬 Watch Now: Feature Video
ಕೊಡಗು: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆ ಈಗ ಮತ್ತೆ ಶುರುವಾಗಿದೆ. ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ನಂತರ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗುತ್ತಿದೆ. ನಿನ್ನೆ ಬಿಸಿಲಿನಿಂದ ಕೂಡಿದ್ದ ವಾತಾವರಣಕ್ಕೆ ನಿರಾಳರಾಗಿದ್ದ ಜನತೆಗೆ ಇದೀಗ ವರುಣ ಮತ್ತೆ ಸುರಿಯುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.