ವಾರದಿಂದ ಉತ್ತಮ ಮುಂಗಾರು... ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ - hubli farmers happy
🎬 Watch Now: Feature Video

ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮುಂಗಾರು ಮಳೆ ಎಡೆಬಿಡದೆ ಸುರಿಯುತ್ತಿದೆ. ಇದು ರೈತರಲ್ಲಿ ಹೊಸ ಚೇತನ ಮೂಡಿಸಿದೆ. ಬೀಜ ಬಿತ್ತನೆ ಮಾಡಿದ್ದ ರೈತನಿಗೆ ಮಳೆರಾಯ ಆಸರೆಯಾಗಿದ್ದಾನೆ. ಸತತವಾಗಿ ಸರಿಯುತ್ತಿರುವ ಮಳೆಯಿಂದ ಹೊಲಗಳಲ್ಲಿ ಬೆಳೆಗಳು ಹಸಿರಾಗಿ ನಳನಳಿಸುತ್ತಿವೆ. ಉತ್ತಮ ಫಸಲು ನೀಡುವ ಭರವಸೆಯನ್ನು ಮಳೆ ಮೂಡಿಸಿವೆ. ಇದೇ ರೀತಿ ಮಳೆಯಾದ್ರೆ ಉತ್ತಮ ಫಸಲು ತೆಗೆಯಬಹುದು ಎಂಬುದು ರೈತರ ವಿಶ್ವಾಸವಾಗಿದೆ.