ಮಳೆ ಬಂದರೆ ಸಾಕು ಹಾವೇರಿ ನಗರಕ್ಕೆ ಜಲಕಂಟಕ: ರಾಜಕಾಲುವೆ ಒತ್ತುವರಿ ಇದಕ್ಕೆಲ್ಲ ಕಾರಣವೇ ?
🎬 Watch Now: Feature Video
ಹಾವೇರಿ: ಮಳೆಗಾಲ ಬಂದರೇ ಸಾಕು ಜಿಲ್ಲೆಯದ್ದು, ಒಂದೇ ಸಮಸ್ಯೆ. ಬಿದ್ದ ನೀರು ಕೆರೆ ಕಾಲುವೆ ಸೇರದೆ ನಗರದ ತಗ್ಗುಪ್ರದೇಶಗಳಿಗೆ ನುಗ್ಗುತ್ತೆ. ತಗ್ಗುಪ್ರದೇಶಗಳಲ್ಲಿರುವ ಮನೆಗಳಲ್ಲಿ ನೀರು ನುಗ್ಗಿ ನೀರು ಚೆಲ್ಲುವುದೇ ಅವರ ಕಾಯಕವಾಗುತ್ತೆ. ಇನ್ನು ಪೊಲೀಸ್ ಕ್ವಾಟರ್ಸ್ ಮುಂದೆ ವಾಹನಗಳು ಚಲಿಸದಂತೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಇದರಿಂದ ಸಾಕಷ್ಟು ಅಸ್ತಿಪಾಸ್ತಿ ಹಾಳಾಗುತ್ತದೆ.ಇದಕ್ಕೆಲ್ಲಾ ಕಾರಣ ನಗರದ ರಾಜಕಾಲುವೆ ಒತ್ತುವರಿ ಎನ್ನುತ್ತಾರೆ ಸ್ಥಳೀಯರು.