ಯಲಹಂಕ : ಗಾಂಜಾ ಮತ್ತಲ್ಲಿ ಯುವಕರ ನಡುವೆ ಫೈಟ್.. ವಿಡಿಯೋ - ಗಾಂಜಾ ಮತ್ತಲ್ಲಿ ಯುವಕರ ನಡುವೆ ಫೈಟ್
🎬 Watch Now: Feature Video
ಯಲಹಂಕ ಮುಖ್ಯ ರಸ್ತೆಯಲ್ಲಿ ಜನರ ದಟ್ಟಣೆಯ ನಡುವೆಯೇ ಯುವಕರಿಬ್ಬರು ಗಾಂಜಾ ನಶೆಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಯಲಹಂಕದ ಅಟ್ಟೂರು ಬಡಾವಣೆಯ ಮುಖ್ಯ ರಸ್ತೆಯಲ್ಲಿ ಇಂದು ಮಧ್ಯಾಹ್ನದ ಸಮಯದಲ್ಲಿ ಗಾಂಜಾ ನಶೆಯಲ್ಲಿದ್ದ ಯುವಕರು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ದೃಶ್ಯ ಸೆರೆ ಹಿಡಿದ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಗ್ರೂಪ್ಗೂ ಈ ವಿಡಿಯೋ ಶೇರ್ ಆಗಿದೆ. ಆದರೆ, ಈವರೆಗೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.