ಅಂಧ ಮಕ್ಕಳ ಶಾಲೆಗೆ ಬಂದ ಹೆಬ್ಬಾವು, ಉರಗ ತಜ್ಞ ಸ್ನೇಕ್ ಕಿರಣ್ರಿಂದ ರಕ್ಷಣೆ - Python in Shimogga news
🎬 Watch Now: Feature Video
ಶಿವಮೊಗ್ಗದ ಶಾರದಾ ದೇವಿ ಅಂಧರ ವಿಕಾಸ ಶಾಲೆಯಲ್ಲಿ ಇಂದು ಸಂಜೆ ಹೆಬ್ಬಾವು ಕಾಣಿಸಿಕೊಂಡಿತ್ತು. ನಗರದ ಹೊರವಲಯ ಗೋಪಾಲ ಗೌಡ ಬಡಾವಣೆಯ ಶಾರದಾ ದೇವಿ ಅಂಧರ ವಿಕಾಸ ಶಾಲೆಯ ಗೋ ಶಾಲೆ ಒಳಗೆ ಹೆಬ್ಬಾವು ನುಗ್ಗುವಾಗ ಕಂಡು ಗಾಬರಿಯಾದ ಸಿಬ್ಬಂದಿ ಉರಗ ತಜ್ಞ ಸ್ನೇಕ್ ಕಿರಣ್ ರವರಿಗೆ ಕರೆ ಮಾಡಿದ್ದಾರೆ. ಸ್ನೇಕ್ ಕಿರಣ್ ತಕ್ಷಣ ಶಾಲೆಗೆ ಆಗಮಿಸಿ, ಸುಮಾರು 7 ಅಡಿ ಉದ್ದದ ಹಾವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.