ರೈತರಿಂದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಸಿಟ್ಟಿಗೆದ್ದು ಮೈಕ್ ಎಸೆದ ತಹಶೀಲ್ದಾರ್! - ವಿಜಯಪುರ ಸುದ್ದಿ
🎬 Watch Now: Feature Video
ವಿಜಯಪುರ:ಬೆಳೆ ವಿಮಾ ಹಣ ಜಮಾ ಆಗದ ಹಿನ್ನಲೆಯಲ್ಲಿ ಜಿಲ್ಲೆಯ ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಿಟ್ಟಿಗೆದ್ದು ತಹಶೀಲ್ದಾರ್ ಮೈಕ್ ಎಸೆದಿರುವ ಘಟನೆ ನಡೆದಿದೆ. ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಮನವಿಗೂ ರೈತರು ಸ್ಪಂದಿಸದೇ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರನ್ನ ಸಂತೈಸಲು ಮುಂದಾದ ತಹಶೀಲ್ದಾರ್ ವಿನಯಕುಮಾರ್ ಪಾಟೀಲ್ ಕೈಯ್ಯಲ್ಲಿದ್ದ ಮೈಕ್ ಕಸಿದುಕೊಂಡಿದ್ದರು. ನಂತರ ವಾಪಸ್ ಕೊಡಲು ಹೋದಾಗ ತಹಶೀಲ್ದಾರ್ ಸಿಟ್ಟಿಗೆದ್ದು ಮೈಕ್ನ್ನು ಬೀಸಾಕಿದ್ದಾರೆ.