ಕೃಷಿ ಕಾಯ್ದೆ ವಿರೋಧಿಸಿ ಸತ್ಯಾಗ್ರಹ: ಭಜನೆ ಮಾಡಿ ಧಾರವಾಡದಲ್ಲಿ ಪ್ರತಿಭಟನೆ - Congress leader PH Niralakeri
🎬 Watch Now: Feature Video
ಧಾರವಾಡ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ಪಿ.ಹೆಚ್.ನೀರಲಕೇರಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಪ್ರತಿದಿನ ಎರಡು ಹಳ್ಳಿಗಳ ಜನರು ಆಗಮಿಸಿ ಸತ್ಯಾಗ್ರಹ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಾರೆ. ಆದರೆ ಇಂದು ಪ್ರತಿಭಟನಾಕಾರರು ಭಜನಾ ಸಂಘದವರನ್ನು ಕರೆಸಿ ಭಜನೆ ಮಾಡಿಸುವ ಮೂಲಕ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿದರು.