ನೀರಿನ ಟ್ಯಾಂಕ್ನಲ್ಲಿ ಆಕಸ್ಮಿಕವಾಗಿ ಬಿದ್ದ ಆಕಳು ರಕ್ಷಣೆ - ನೀರಿನ ಟ್ಯಾಂಕ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4597113-thumbnail-3x2-vid.jpg)
ಬಾಗಲಕೋಟೆ: ನೀರು ತುಂಬುವ ತಗ್ಗು ಪ್ರದೇಶದಲ್ಲಿ ಬಿದ್ದ ಆಕಳನ್ನು ಸ್ಥಳೀಯರು ಸೇರಿಕೊಂಡು ಮೇಲೆ ಎತ್ತುವ ಮೂಲಕ ಮಾನವೀಯತೆ ಮೆರೆದ ಘಟನೆ ನಗರದಲ್ಲಿ ಜರುಗಿದೆ. ನವನಗರದ 21 ಸೆಕ್ಟರ್ನಲ್ಲಿ ಮನೆಯ ಪಕ್ಕದಲ್ಲಿ ನಿರ್ಮಿಸಿದ್ದ ನೀರಿನ ಟ್ಯಾಂಕ್ನಲ್ಲಿ ಆಕಳು ಆಕಸ್ಮಿಕವಾಗಿ ಬಿದ್ದಿದೆ. ಚಿಕ್ಕದಾಗಿರುವ ಪರಿಣಾಮ ಏಳುವುದಕ್ಕೂ ಆಗದೆ ಒದ್ದಾಡು ತ್ತಿತ್ತು. ಬಸವೇಶ್ವರ ಎಂಜಿನಿಯರಿಂಗ್ ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ ಬಳ್ಳಿ ಅವರು, ನಗರಸಭೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಯುವಕರ ಗಮನಕ್ಕೆ ತಂದರು. ಇದರಿಂದ ಯುವಕರು ಹಗ್ಗದ ಮೂಲಕ ಮೇಲೆತ್ತುವ ಕಾರ್ಯಾಚರಣೆ ನಡೆಸಿದರು. ಕೆಲ ಸಮಯದ ನಂತರ ಯುವಕರು ಆಕಳು ಮೇಲೆಕ್ಕೆ ಎತ್ತಿ ಹೂರಗೆ ತೆಗೆದರು. ಇದರಿಂದ ಬದುಕಿದೆ ಬಡ ಜೀವ ಎಂದು ಹೂರಗೆ ಬಂದ ಆಕಳು ನಿಟ್ಟುಸಿರು ಬಿಟ್ಟಿತು. ಆಕಳು ಪ್ರಾಣ ಉಳಿಸಿದ ಯುವಕರ ಕಾರ್ಯಕ್ಕೆ ಎಲ್ಲರೂ ಶ್ಲಾಘನೀಯ ವ್ಯಕ್ತಪಡಿಸಿದರು.