ಕಾಂಗ್ರೆಸ್ ಪರ ಅಲೆ ಕಾಣಿಸ್ತಿದೆ: ಪ್ರಿಯಾಂಕ್ ಖರ್ಗೆ ವಿಶ್ಲೇಷಣೆ - ಕಾಂಗ್ರೆಸ್ ಪರ ಅಲೆ ಕಾಣಿಸ್ತಿದೆ
🎬 Watch Now: Feature Video
ಬೆಂಗಳೂರು: ಬಹುಶಃ ಇವತ್ತು ಸ್ವಲ್ಪ ಕಾಂಗ್ರೆಸ್ ಪರ ಅಲೆ ಕಾಣಿಸ್ತಿದೆ. ಮೋದಿಯವರ ಆರ್ಥಿಕ ನೀತಿ, ದುರಾಡಳಿತದ ಬಗ್ಗೆ ಜನರು ಸ್ವಲ್ಪ ಜಾಗೃತರಾಗುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ. ಮಹಾರಾಷ್ಟ್ರ, ಹರಿಯಾಣ ಫಲಿತಾಂಶ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇಷ್ಟೇ ಸಾಲದು ಜನ ಮತ್ತಷ್ಟು ಜಾಗೃತರಾಗಬೇಕು. ದೇಶದಲ್ಲೇ ಹರಿಯಾಣದಲ್ಲಿ ಹೆಚ್ಚು ನಿರುದ್ಯೋಗ ಇದೆ. ಕುಸಿಯುತ್ತಿರುವ ಆರ್ಥಿಕ ನೀತಿಯಿಂದ ಜನ ನಮ್ಮ ಪರ ನಿಂತಿದ್ದಾರೆ. ಗೋವಾ, ಮಧ್ಯಪ್ರದೇಶ, ಕರ್ನಾಟಕದಂತೆ ಬಿಜೆಪಿಯವರು ಆಪರೇಷನ್ ಕಮಲ ಮಾಡಿದ್ರು ಅನುಮಾನವಿಲ್ಲ. ಇನ್ನು ಡಿಕೆಶಿಗೆ ಜಾಮೀನು ಸಿಕ್ಕಿರುವ ಕುರಿತು ಮಾತನಾಡಿ, ಡಿ.ಕೆ. ಶಿವಕುಮಾರ್ಗೆ ಜಾಮೀನು ಸಿಕ್ಕಿದ್ದು ಸಂತೋಷದ ಸಂಗತಿ. ಇನ್ನು ಕಾನೂನು ಹೋರಾಟ ಮುಗಿದಿಲ್ಲ. ಏನೇ ಆದರೂ ಡಿಕೆ ಶಿವಕುಮಾರ್ ತಲೆ ಬಗ್ಗಿಸದಂತೆ ಕಾನೂನು ಹೋರಾಟ ಮಾಡಿದ್ದಾರೆ ಎಂದರು.