ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಮಹಿಳೆ: ಮೂವರಿಗೆ ಗುದ್ದಿದ ಕಾರು! - ಕಾರಿನ ನಿಯಂತ್ರಣ ತಪ್ಪಿ ಬೈಕ್ ಸವಾರರಿಗೆ ಡಿಕ್ಕಿ
🎬 Watch Now: Feature Video
ಮಹಿಳೆಯೊಬ್ಬರು ಬೇಜವಾಬ್ದಾರಿಯಾಗಿ ಬ್ರೇಕ್ ಬದಲಿಗೆ ಎಕ್ಸಲೇಟರ್ ಒತ್ತಿದ ಪರಿಣಾಮ ಕಾರಿನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್ ಒಳಗೆ ಪೆಟ್ರೋಲ್ ಹಾಕಿಸುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಘಟನೆ ಶಿರಸಿ ನಗರದ ಡೆವಲಪ್ಮೆಂಟ್ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. ಮಹಿಳೆ ತನ್ನ ಮಾರುತಿ 800 ಕಾರಿನಲ್ಲಿ ಪೆಟ್ರೋಲ್ ತುಂಬಿಸಲು ಪೆಟ್ರೋಲ್ ಬಂಕ್ಗೆ ಆಗಮಿಸಿದಾಗ ಬ್ರೇಕ್ ಹಾಕುವ ಬದಲು ಎಕ್ಸಲೇಟರ್ ಒತ್ತಿದ್ದಾಳೆ. ಇದರಿಂದ ನಿಯಂತ್ರಣಕ್ಕೆ ಸಿಗದ ಕಾರು ಪೆಟ್ರೋಲ್ ಹಾಕಿಸುತ್ತಿದ್ದ ಬೈಕ್ ಸವಾರರಿಗೆ ಗುದ್ದಿದೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶಿರಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಂಕ್ನಲ್ಲಿ ನಡೆದ ಘಟನೆ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.