‘ವಂದೇ ಮಾತರಂ’ ಹೇಳದೆ ಮೌನಕ್ಕೆ ಶರಣಾದ ಮಹೇಶ್ ವಿಕ್ರಂ ಹೆಗಡೆ- ವಿಡಿಯೋ ವೈರಲ್ - ವಿಡಿಯೋ ವೈರಲ್
🎬 Watch Now: Feature Video
ಪೋಸ್ಟ್ ಕಾರ್ಡ್ ಖ್ಯಾತಿಯ ಮಹೇಶ್ ವಿಕ್ರಂ ಹೆಗಡೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರ ಎದುರು ‘ವಂದೇ ಮಾತರಂ’ ಹೇಳದೆ ಮೌನಕ್ಕೆ ಶರಣಾಗಿರುವ ಘಟನೆ ನಡೆದಿದೆ. ಮಹೇಶ್ ವಿಕ್ರಮ್ ಮಂಗಳೂರಿನಿಂದ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣ ತಲುಪಿದ್ದರು. ಆದರೆ, ಈ ಸಂದರ್ಭದಲ್ಲಿ ಕೆ ಕವಿತಾ ರೆಡ್ಡಿ, ನಜ್ಮಾ ನಜೀರ್ ಮತ್ತು ಅಮೂಲ್ಯ ವಿಕ್ರಮ್ ಅವರನ್ನು ಸುತ್ತುವರೆದಿದ್ದರು. ಅಲ್ಲದೆ, ಪೋಸ್ಟ್ ಕಾರ್ಡ್ ಮೂಲಕ ಎಲ್ಲರಿಗೂ ದೇಶಪ್ರೇಮದ ಪಾಠ ಮಾಡುವ ನೀವು ದಯವಿಟ್ಟು ನಮ್ಮ ಜೊತೆ “ವಂದೇ ಮಾತರಂ” ಎಂಬ ಘೋಷವಾಕ್ಯ ಮೊಳಗಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೊಪ್ಪದ ಮಹೇಶ್ ವಿಕ್ರಂ ಒಂದೇ ಮಾತರಂ ಹೇಳದೆ ನಗುನಗುತ್ತಲೆ ಮೌನಕ್ಕೆ ಶರಣಾಗಿದರು. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
Last Updated : Feb 4, 2020, 1:32 AM IST