ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಪೊಲೀಸರ ಸರ್ಪಗಾವಲು.. ರಸ್ತೆಗಳೆಲ್ಲ ಬಂದ್.. - ಸಂಭ್ರಮಾಚರಣೆಗೆ ಕಡಿವಾಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10074853-thumbnail-3x2-bng.jpg)
ಪ್ರತಿಬಾರಿ ಎಂ.ಜಿ ರಸ್ತೆ ಹಾಗೂ ಬಿಗ್ರೇಡ್ ರಸ್ತೆಯಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುತ್ತಿದ್ದ ಹೊಸ ವರ್ಷಾಚರಣೆ ಈ ಬಾರಿ ಕಟ್ಟು ನಿಟ್ಟಿನ ಕ್ರಮದಿಂದಾಗಿ ನಿಷೇಧಗೊಂಡಿದೆ. ಕೊರೊನಾ ಹಿನ್ನೆಲೆ ಸಂಭ್ರಮಾಚರಣೆಗೆ ಅವಕಾಶ ನೀಡದೇ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆ ಆಗುತ್ತಿದ್ದಂತೆ ಅನಿಲ್ ಕುಂಬ್ಳೆ ವೃತ್ತ, ಬಿಗ್ರೇಡ್ ರೋಡ್ ಹಾಗೂ ಎಂ.ಜಿ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ನಿರ್ಬಂಧಿಸಿದರು. ಸದ್ಯ ಎಂ.ಜಿ ರೋಡ್ ಹಾಗೂ ಬಿಗ್ರೇಡ್ ರೋಡ್ ಸದ್ಯದ ಚಿತ್ರಣ ಬಗ್ಗೆ ನಮ್ಮಪ್ರತಿನಿಧಿ ನಡೆಸಿದ ವಾಕ್ ಥ್ರೂ ಇಲ್ಲಿದೆ..