ಹುಬ್ಬಳ್ಳಿಯಲ್ಲಿ ಪೊಲೀಸ್ ಕಮಿಷನರ್ ಲಾಬುರಾಮ್ ರೌಂಡ್ಸ್ - Laburam Rounds in Hubli
🎬 Watch Now: Feature Video
ಹುಬ್ಬಳ್ಳಿ: ಮಕರ ಸಂಕ್ರಾಂತಿ ಹಬ್ಬದ ನಡುವೆಯೂ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಸಿಟಿ ರೌಂಡ್ಸ್ ಹಾಕಿದ್ದಾರೆ. ನಗರದ ಪ್ರಮುಖ ರಸ್ತೆಗಳು ಹಾಗೂ ಇಕ್ಕಟ್ಟಾದ ಸರ್ಕಲ್ಗಳ ಪರಿಶೀಲನೆ ನಡೆಸಿದರು. ದೇಶಪಾಂಡೆ ನಗರ, ಹೊಸೂರು ಸರ್ಕಲ್ ಸೇರಿದಂತೆ ಹೆಚ್ಚು ವಾಹನ ದಟ್ಟಣೆ ಇರುವಂತಹ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಸರ್ಕಲ್ಗಳ ಪರಿಶೀಲನೆ ನಡೆಸಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸೇರಿದಂತೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಟ್ರಾಫಿಕ್ ನಿಯಂತ್ರಣಕ್ಕಾಗಿ ರಸ್ತೆಗಳ ಅಗಲೀಕರಣ ಹಾಗೂ ಒನ್ ವೇ ಹಾಗೂ ತಿರುವುಗಳ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಲಾಬುರಾಮ್ ಸಮಾಲೋಚನೆ ನಡೆಸಿದರು.