ಸೇನೆಗೆ ಸೇರಲು ನಕಲಿ ದಾಖಲೆ ಸೃಷ್ಟಿ... ಚಿತ್ರದುರ್ಗ ಪೊಲೀಸರ ಬಲೆಗೆ ಬಿದ್ದ ಆರೋಪಿಗಳು - chitradurga latest crime news
🎬 Watch Now: Feature Video
ಚಿತ್ರದುರ್ಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೇನೆಗೆ ಸೇರಲು ನಕಲಿ ದಾಖಲೆ ಸೃಷ್ಟಿಸಿದವರನ್ನು ಹಾಗೂ ನಕಲಿ ದಾಖಲೆ ಉಪಯೋಗಿಸಿ ಸೇನೆಗೆ ಸೇರಲು ಪ್ರಯತ್ನಿಸಿದ್ದವರನ್ನು ಬಂಧಿಸಿದ್ದಾರೆ. ಹತ್ತು ಜನ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಚಿತ್ರದುರ್ಗದ ಪೊಲೀಸರು ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ಎಂಟು ಜನ ಆರೋಪಿಗಳನ್ನು ಸೆರೆ ಹಿಡಿಯಲು ಬಲೆ ಬೀಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾಹಿತಿ ನೀಡಿದ್ದಾರೆ.