ನಮೋ ಹುಟ್ಟುಹಬ್ಬ: 70 ಕೆಜಿ ತೂಕದ ಬೃಹತ್ ಲಡ್ಡು ಕತ್ತರಿಸಿ ಸಂಭ್ರಮ, ಪೌರಕಾರ್ಮಿಕರಿಗೆ ಸನ್ಮಾನ - ಪ್ರಧಾನಿ ಹುಟ್ಟುಹಬ್ಬ
🎬 Watch Now: Feature Video
ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಸಚಿವ ಸೋಮಣ್ಣ ಹಾಗೂ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ ನೇತೃತ್ವದಲ್ಲಿ ಗೋವಿಂದರಾಜನಗರದ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ 70 ಕೆಜಿ ತೂಕದ ಬೃಹತ್ ಲಡ್ಡು ಕತ್ತರಿಸಿ, ಬಳಿಕ 70 ಪೌರಕಾರ್ಮಿಕರಿಗೆ ಸನ್ಮಾನ ಹಾಗೂ 7 ಮಂದಿ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಬೆಳಗ್ಗೆ 9 ಗಂಟೆಗೆ ಮಾರುತಿ ಮಂದಿರದಿಂದ ಸೈಕಲ್ ಜಾಥಾ ಕೂಡ ಹಮ್ಮಿಕೊಳ್ಳಲಾಗಿತ್ತು. ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣ ಸ್ವಾಮಿ ಹಾಗೂ ಪತ್ನಿ ಉಷಾ ನಾರಾಯಣ ಸ್ವಾಮಿ ಪೌರಕಾರ್ಮಿಕರ ಪಾದ ಪೂಜೆ ಮಾಡಿ ಸಿಹಿ ಹಂಚಿ ಗೌರವ ಸಲ್ಲಿಸದರು.